BlueGlobe International
My status

Translation Services

Translation Services

Career With BlueGlobe

Banner
Banner
Banner

SAIC

"SAIC is a FORTUNE 500® scientific, engineering, and technology applications company that uses its deep domain knowledge to solve problems of vital importance to the nation and the world, in national security, energy and the environment, critical infrastructure, and health. BlueGlobe International LLC consistently provides language services on a global scale which meet the strict vendor standards required by SAIC."


Fulbright

"BlueGlobe cares .. our expectations were exceeded with accuracy and promptness. A long term relationship will benefit our firm and yours."


Crowell-moring

"Thanks again for extra-ordrinary services."


AAAS

"Friendly staff combined with unusual promptness and services will see our association always requesting BlueGlobe."

* For Translation - click flag

ಕನ್ನಡ ಅನುವಾದ ಸೇವೆಗಳು

Kannada

ಬ್ಲ್ಯೂಗ್ಲೋಬ್ ಇಂಟರ್ನ್ಯಾಷನಲ್ – ಅರ್ಹ ಕನ್ನಡ ಅನುವಾದಕರೊಡನೆ

ನಮ್ಮ ವೃತ್ತಿಪರ ಕನ್ನಡ ಅನುವಾದಕರು ಮೂಲ ಭಾಷೆ, ಅನುವಾದಿಸಬೇಕಾಗಿರುವ ಭಾಷೆ, ಹಾಗೂ ವಿಷಯಗಳ ಸವಿಸ್ತಾರವಾದ ಜ್ಞಾನದೊಂದಿಗೆ ಅನುವಾದದ ಸೇವೆಗಳನ್ನು ನೀಡುತ್ತಾರೆ. ಉನ್ನತ ಕೌಶಲ್ಯವಿರುವ, ಅನುಭವಸ್ಥ ಕನ್ನಡ ಅನುವಾದಕರನ್ನು ನೇಮಿಸಿಕೊಳ್ಳುವ ಬ್ಲ್ಯೂಗ್ಲೋಬ್, ವೆಬ್ ಸೈಟ್ಗಳು, ಇ-ಮೇಲ್ಗಳು, ಪತ್ರಗಳು, ಪತ್ರಿಕೆಗಳು, ಕಾನೂನುಬದ್ಧ ಕಡತಗಳು, ವೈದ್ಯಕೀಯ ನಿಯತಕಾಲಿಕಗಳು, ತಾಂತ್ರಿಕ ಕೈಪಿಡಿಗಳು, ಪುಸ್ತಕಗಳು, ಅಡುಗೆಗಳು, ಪಟ್ಟಿಗಳು, ಹಚ್ಚೆಗಳನ್ನೂ(!) ಒಳಗೊಂಡಂತೆ ಯಾವುದೇ ಪ್ರಕಾರದ ಅಥವಾ ಯಾವುದೇ ಗಾತ್ರದ ಯೋಜನೆಯನ್ನು ಅನುವಾದಿಸಬಲ್ಲದು. ಇದರ ಪರಿಣಾಮವಾಗಿ ನಾವು ಕಾನೂನು, ಹಣಕಾಸು, ವೈದ್ಯಕೀಯ, ತಾಂತ್ರಿಕ, ಮಾರುಕಟ್ಟೆ ಮುಂತಾದ ವಿಭಿನ್ನ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಅನುವಾದಿಸುತ್ತೇವೆ. ದೋಷಪೂರಿತ ಅನುವಾದಗಳನ್ನು ತಡೆಯಲು ಮಹತ್ವದ ಕಾಳಜಿ ವಹಿಸುವ ಬ್ಲ್ಯೂಗ್ಲೋಬ್, ಸಲ್ಲಿಸಲಾದ ಎಲ್ಲ ಸರಕುಗಳೂ ಕೇವಲ ಸ್ಥಳೀಯ ಕನ್ನಡ ಅನುವಾದಕರಿಂದ ಮಾತ್ರವೇ ಅನುವಾದಿಸಲ್ಪಡುತ್ತದೆಂದು ಗ್ರಾಹಕರಿಗೆ ಭರವಸೆ ನೀಡುತ್ತದೆ. ಒಂದು ಯೋಜನೆಗೆ ನೇಮಿಸಲಾದ ಅನುವಾದಕರು ಧೃಢೀಕರಿಸಬಲ್ಲ ಅನುಭವ ಹಾಗೂ ಗ್ರಾಹಕರ ಯೋಜನೆಯ ಕ್ಷೇತ್ರದಲ್ಲಿ ನಿರ್ದಿಷ್ಟ ಜ್ಞಾನ ಹೊಂದಿರಬೇಕು. ಮೂಲಭೂತ ಅವಶ್ಯಕತೆಗಳ ಹೊರತಾಗಿ ಅವರು ಒಂದು ಪರಿಪೂರ್ಣ ಅನುವಾದವನ್ನು ಸಾಧಿಸಲು ಅವಶ್ಯಕವಾದ ಮುಖ್ಯವಾದ “ಭಾಷೆಯ ಉಪಾಯ”ಗಳನ್ನೂ ತಿಳಿದುಕೊಂಡಿರುತ್ತಾರೆ.

ಬ್ಲ್ಯೂಗ್ಲೋಬ್ ಇಂಟರ್ನ್ಯಾಷನಲ್ ಏಕೆ?

ಏಕೆಂದರೆ ನಮಗೆ ನಮ್ಮ ಕೆಲಸದಲ್ಲಿ ಅದ್ಭುತವಾದ ಅಭಿಮಾನವಿದೆ ಹಾಗೂ ನಾವು ಫಲಿತಾಂಶಗಳ ಬಗೆಗೆ ಕಾಳಜಿ ವಹಿಸುತ್ತೇವೆ! ಭಾಷಾ ಸೇವೆಗಳಲ್ಲಿ (ಅನುವಾದ, ಅರ್ಥ ವಿವರಣೆ, ಲೇಖನ ಬರಹಗಳು, ಸ್ಥಳೀಕರಣಗಳು, ಮುಂತಾದವು) ಅಂತರರಾಷ್ಟ್ರೀಯ ಮಾರುಕಟ್ಟೆಯ ಮುಂದಾಳುವಾಗಿ ನಮಗೆ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಬ್ಬರಿಗೂ ಜಾಗತಿಕ ಮಟ್ಟದಲ್ಲಿ ಸೇವೆಗಳನ್ನು ನೀಡುವ ಸಾಮರ್ಥ್ಯವಿದೆ. ನಮ್ಮ ಗ್ರಾಹಕರಿಗೆ ೧೦೦% ನಿಖರವಾದ ಅನುವಾದವನ್ನು ನೀಡಲು ಅನುವಾದದ ಪ್ರತೀ ಹಂತದಲ್ಲೂ ಗುಣಮಟ್ಟ ಪರೀಕ್ಷೆಯ ಅನೇಕ ಶ್ರೇಣಿಗಳಿರುತ್ತವೆ. ಬ್ಲ್ಯೂಗ್ಲೋಬ್ಗೆ ನಿಮ್ಮ ಮನಶ್ಯಾಂತಿ ಮುಖ್ಯ ಹಾಗೂ ನೀವು ಅರ್ಹರಾದ ಹಾಗೂ ಬಯಸಿದ ಗುಣಮಟ್ಟ ನಿಮಗೆ ದೊರಕುತ್ತದೆಂದು ನಾವು ಖಚಿತ ಭರವಸೆ ನೀಡುತ್ತೇವೆ.

 • ವಿಶ್ವಾದ್ಯಂತ ೧೦೦ ಕ್ಕೂ ಹೆಚ್ಚು ಭಾಷೆಗಳು
 • ಎಲ್ಲ ವಿಶೇಷ ಪ್ರಾವೀಣ್ಯತೆಗಳು
 • ಬಹಳ ಸ್ಫರ್ಧಾತ್ಮಕ ದರಗಳು
 • ಉತ್ತಮ ಗುಣಮಟ್ಟದ ಸೇವೆಗಳು
 • ಉನ್ನತ ಮಟ್ಟದ ಗ್ರಾಹಕ ಕಾಳಜಿ
 • ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಷಾಂತರ ಸಂಸ್ಥೆ
 • ನೂರಾರು ಪ್ರಮಾಣೀಕೃತ ಭಾಷಾ ಸೇವಾ ಪೂರೈಕೆದಾರರು
 • ಆರಂಭದಿಂದ ಅಂತ್ಯದವರೆಗೂ ತಂಡವಾಗಿ ಕೆಲಸ ಮಾಡುವುದು
 • ದಿನದ ೨೪ ಗಂಟೆ, ವಾರದ ೭ ದಿನಗಳೂ ಲಭ್ಯ

ನಮ್ಮ ೧೦-ಹಂತದ ಗುಣಮಟ್ಟ ಭರವಸೆಯ ಕಾರ್ಯಕ್ರಮ

ನಮ್ಮ ಹಂತ-ಹಂತದ ಗುಣಮಟ್ಟದ ಖಚಿತತೆಯ ಕಾರ್ಯಕ್ರಮವನ್ನು ಅನುಸರಿಸುವುದು ಎಲ್ಲ ಕನ್ನಡ ಅನುವಾದದ ಯೋಜನೆಗಳಲ್ಲೂ ಅತ್ಯುತ್ತಮ ಗುಣಮಟ್ಟದ ಭರವಸೆ ನೀಡುತ್ತದೆ:

 • ಪ್ರತೀ ಕನ್ನಡ ಅನುವಾದದ ಯೋಜನೆಯನ್ನೂ ಒಬ್ಬ ಸಮರ್ಥ ಪ್ರಾಜೆಕ್ಟ್ ಮ್ಯಾನೇಜರ್ ವಿಮರ್ಶಿಸುತ್ತಾರೆ.
 • ಪ್ರಾಜೆಕ್ಟ್ ಮ್ಯಾನೇಜರ್ ಒಂದು ವಿವರವಾದ ಅನುವಾದದ ಯೋಜನೆಯನ್ನು ರೂಪಿಸುತ್ತಾರೆ.
 • ಅನುವಾದದ ಯೋಜನೆಯನ್ನು ಒಂದು ವೃತ್ತಿಪರ ಅನುವಾದಕರಿಗೆ ನಿಯೋಜಿಸಲಾಗುತ್ತದೆ
 • ಯೋಜನೆಗಾಗಿ ಒಂದು ಶಬ್ದಾವಳಿ ಮಾಹಿತಿಕೋಶವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ.
 • ಯೋಜನೆಗಾಗಿ ಒಂದು ಸಿಎಟಿ ಸಾಧನವನ್ನು ಪ್ರೋಗ್ರಾಮ್ಗೊಳಿಸಲಾಗುತ್ತದೆ
 • ಯೋಜನೆಯನ್ನು ಕನ್ನಡಕ್ಕೆ ಅನುವಾದಿಸಲಾಗುತ್ತದೆ
 • ಯಾವತ್ತೂ ಗುಣಮಟ್ಟ ನಿಯಂತ್ರಣದ ಪರೀಕ್ಷೆಗಳು ಜಾರಿಯಲ್ಲಿರುತ್ತವೆ
 • ಅನುವಾದವನ್ನು ಬಯಸಿದ ನಮೂನೆಯಲ್ಲಿ (ಡಿಟಿಪಿ) ಇಡಲಾಗುತ್ತದೆ
 • ಭಾಷೆಯನ್ನು ಮಾತನಾಡುವ ಒಬ್ಬ ಸ್ಥಳೀಕರು ಎರಡನೆಯ ಬಾರಿಗೆ ಕರಡು ತಿದ್ದುತ್ತಾರೆ
 • ಅನುವಾದಕರು ಹಾಗೂ ಪ್ರಾಜೆಕ್ಟ್ ಮ್ಯಾನೇಜರ್ರಿಂದ ಅಂತಿಮ ವಿಮರ್ಶೆ – ಗ್ರಾಹಕರಿಗೆ ಸಲ್ಲಿಸುವಿಕೆ

ನಮ್ಮ ಕೌಶಲ್ಯಪೂರ್ಣ, ವೃತ್ತಿಪರ ಅನುವಾದಕರ ಜಾಗತಿಕ ಜಾಲ ತುಂಬ ಕಡಿಮೆ ಸಮಯಾವಧಿಯಿರುವ ಅತ್ಯಂತ ದೊಡ್ಡ ಯೋಜನೆಯನ್ನೂ ಶೀಘ್ರವಾಗಿ ಮುಗಿಸುವ ಭರವಸೆ ನೀಡುತ್ತಾರೆ. ಮೂಲ ಭಾಷೆಯಿಂದ ಬೇಕಾಗಿರುವ ಭಾಷೆಯಲ್ಲಿನ ಅವಶ್ಯಕತೆಗಳೇನೇ ಇರಲಿ (ಕನ್ನಡದಿಂದ ಇಂಗ್ಲಿಷ್ (ಯುಎಸ್), ಇಂಗ್ಲಿಷ್ನಿಂದ (ಯುಎಸ್) ಕನ್ನಡ, ಅಥವಾ ಇತರ ಯಾವುದೇ ಭಾಷೆ (ಹಂಗೇರಿಯನ್-ಯುಕ್ರೇನಿಯನ್, ಹೀಬ್ರೂ-ಗ್ರೀಕ್), ಮುಂತಾದವು), ಬ್ಲ್ಯೂಗ್ಲೋಬ್ ಇಂಟರ್ನ್ಯಾಷನಲ್ನಲ್ಲಿ ನಿಮ್ಮ ಅನುವಾದದ ಯೋಜನೆಯ ನಿಖರತೆ ಹಾಗೂ ಗುಣಮಟ್ಟದ ಖಚಿತತೆ ನೀಡಲಾಗುತ್ತದೆ.

ಅನುವಾದದ ದರ – ಕನ್ನಡ ಭಾಷೆ

ಒಂದು ಅನುವಾದದ ಯೋಜನೆಯ ದರದ ಮೇಲೆ ಅನೇಕ ಅಂಶಗಳು (ಅಕ್ಷರ ನಿಷ್ಕೃಷ್ಟತೆ, ಕೇಳಿದ ಸಮಯಾವಧಿ, ಯೋಜನೆಯ ಒಟ್ಟೂ ಶಬ್ದಗಳ ಎಣಿಕೆ, ಕಡತದ ನಮೂನೆ, ಮುಂತಾದವು) ಪರಿಣಾಮ ಬೀರುತ್ತವೆ. ಒಂದು ನಿಖರವಾದ ಉಲ್ಲೇಖಕ್ಕಾಗಿ ಕೇವಲ ’ಉಲ್ಲೇಖ ಪಡೆಯಿರಿ’ ಎನ್ನುವಲ್ಲಿ ಕ್ಲಿಕ್ ಮಾಡಿ ಹಾಗೂ ಆನ್ಲೈನ್ ನಮೂನೆಯನ್ನು ಪೂರ್ಣಗೊಳಿಸಿ. ಯಾವುದೇ ಗುಪ್ತ ಹೆಚ್ಚುವರಿ ವೆಚ್ಛಗಳಿಲ್ಲದ ಒಂದು ನಿಖರವಾದ ಉಲ್ಲೇಖಕ್ಕಾಗಿ ಇದರ ಜೊತೆಗೆ ವಿಷಯದ ಕಡತದ ಫೈಲ್ಗಳನ್ನು ಇ-ಮೇಲ್ ಮಾಡಿ ಅವಶ್ಯಕ ಮಾಹಿತಿ ಹಾಗೂ ದಾಖಲೆಗಳನ್ನು ನೀಡಬಹುದು.

ಬ್ಲ್ಯೂಗ್ಲೋಬ್ ಇಂಟರ್ನ್ಯಾಷನಲ್ ದಿನದ ೨೪ ತಾಸುಗಳು, ವಾರದ ೭ ದಿನಗಳು ನಮ್ಮ ಗ್ರಾಹಕರಿಗೆ ಸೇವೆ ನೀಡಲು ಲಭ್ಯವಿರುತ್ತದೆ! ನಿಮ್ಮ ಯೋಜನೆಯಲ್ಲಿ ಸಹಕಾರ ನೀಡಲು ನಮ್ಮ ಸ್ನೇಹಪರ ಸಿಬ್ಬಂದಿ ಅವರಿಗೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ.

ಭಾಷಾ ದೂರವಾಣಿ ನಿರ್ವಾಹಕರು:
ಇಂಗ್ಲಿಷ್
+1.541.330.0450 (USA)

ನಮ್ಮ ಇ-ಮೇಲ್ ಹೆಲ್ಪ್ ಡೆಸ್ಕ್ ಅನ್ನು (೨೪/೭) ಈ ಕೆಳಗಿನ ಭಾಷೆಗಳಲ್ಲಿ ನೀಡಲಾಗುತ್ತದೆ:
ಇಂಗ್ಲಿಷ್ – ರಷ್ಯನ್ - ಸ್ಪ್ಯಾನಿಷ್ - ಚೈನೀಸ್ - ಫ್ರೆಂಚ್ - ಜಪಾನೀಸ್
This e-mail address is being protected from spambots. You need JavaScript enabled to view it

ಗೌಪ್ಯತೆ ಹಾಗೂ ಸೇವೆ

ಬ್ಲ್ಯೂಗ್ಲೋಬ್ಗೆ ಅದರ ಗ್ರಾಹಕರ ಗೌಪ್ಯತೆ ತುಂಬ ಮುಖ್ಯ. ಎಲ್ಲ ಕಡತಗಳು, ಯೋಜನೆಗಳು, ಇ-ಮೇಲ್ಗಳು, ಪತ್ರಗಳು, ದಾಖಲೆಗಳು ಮುಂತಾದವನ್ನು ಕಟ್ಟುನಿಟ್ಟಾದ ಗೌಪ್ಯತೆಯ ನಿಯಮಗಳಡಿಯಲ್ಲಿ ಇಡಲಾಗುತ್ತದೆಂದು ನಾವು ಭರವಸೆ ನೀಡುತ್ತೇವೆ. ಪ್ರತೀ ಗ್ರಾಹಕರಿಗೂ ನಮ್ಮ ಸೇವೆ ಅನುಕೂಲಕರ ಹಾಗೂ ವಿಶ್ವಾಸಾರ್ಹವೆಂದು ಅನಿಸುವಂತೆ ಮಾಡುವುದು ನಮ್ಮ ನಿರಂತರ ಗುರಿ. ದಯವಿಟ್ಟು ನಮ್ಮ ವೆಬ್ ಸೈಟ್ಗೆ ಭೇಟಿ ನೀಡಿ ನಮ್ಮ ಗೌಪ್ಯತಾ ನಿಯಮವನ್ನು ವಿಮರ್ಶಿಸಿ. ಈ ಪುಟವು ಗ್ರಾಹಕರಿಗೆ ನಾವು ಸಂಗ್ರಹಿಸುವ ಮಾಹಿತಿಯ ಪ್ರಕಾರ, ಅದನ್ನು ಹೇಗೆ ರಕ್ಷಿಸಲಾಗುತ್ತದೆ, ಹಾಗೂ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎನ್ನುವುದರ ಬಗೆಗಿರುವ ಗ್ರಾಹಕರ ಆಯ್ಕೆಗಳ ಬಗೆಗೆ ಮಾಹಿತಿ ನೀಡುತ್ತದೆ. ನಾವು ನಿಮಗೆ ಸೇವೆಗಳು ಹಾಗೂ ಗೌಪ್ಯತೆಯ ಬಗೆಗಿನ ನಮ್ಮ ಬದ್ಧತೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ನಮ್ಮ ಗೌಪ್ಯತಾ ನಿಯಮವನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತೇವೆ. ನಾವು ನಿಮ್ಮ ಸಲಹೆಗಳು ಹಾಗೂ ಭಾಗವಹಿಸುವಿಕೆಯನ್ನು ಯಾವತ್ತೂ ಸ್ವಾಗತಿಸುತ್ತೇವೆ! ಉನ್ನತ ಮಟ್ಟದ ಸಮಗ್ರತೆ ಹಾಗೂ ಸೇವೆಗೆ ಸರಿಸಾಟಿಯಿಲ್ಲದ ಬದ್ಧತೆಯ ಮೂಲಕ ಬ್ಲ್ಯೂಗ್ಲೋಬ್ ಇಂಟರ್ನ್ಯಾಷನಲ್ಗೆ ತಮ್ಮ ಯೋಜನೆಗಳು ಹಾಗೂ ವೈಯುಕ್ತಿಕ ಮಾಹಿತಿಗಳಿಗೆ ಸಂಬಂಧಪಟ್ಟಂತೆ ನಮ್ಮ ಸಂಸ್ಥೆಯನ್ನು ಸಂಪೂರ್ಣವಾಗಿ ನಂಬುವ ಗ್ರಾಹಕವರ್ಗವನ್ನು ಹೊಂದಲು ಹೆಮ್ಮೆಯೆನಿಸುತ್ತದೆ. ಪುನಃ ಬರುವ ಗ್ರಾಹಕರಾಗಿ ಅವರು ನಮ್ಮ ಎಲ್ಲಕ್ಕಿಂತ ದೊಡ್ಡ ಆಸ್ತಿ.

ಅನುವಾದಿಸಿದವರು ರಾಜು ಶಾನಭಾಗ

Contact Us ಉದ್ಯೋಗ ಹುಡುಕುತ್ತಿದ್ದೀರೇ?

ನೀವು ಭಾಷಾ ಸೇವೆಗಳಲ್ಲಿ ಪರಿಣತಿ ಹೊಂದಿರುವ ಪ್ರತಿಭಾನ್ವಿತ ವೃತ್ತಿಪರರೇ? ಹಾಗಾದಲ್ಲಿ ನಾವು ನಿಮಗೆ ಈ ವೆಬ್ ಸೈಟ್ನಲ್ಲಿರುವ ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಲು ಪ್ರೇರೇಪಿಸುತ್ತೇವೆ! ಇದು ಉಚಿತ, ಸುಲಭ, ಹಾಗೂ ನಿಮ್ಮ ಸಮಯದಲ್ಲಿ ಕೇವಲ ೫-೭ ನಿಮಿಷಗಳನ್ನಷ್ಟೇ ತೆಗೆದುಕೊಳ್ಳುತ್ತದೆ.

Contact Us ವೃತ್ತಿಪರ ಕರಡು ತಿದ್ದುವಿಕೆ !

ಕರಡಚ್ಚು ತಿದ್ದುವವರಾಗಿ ಅರ್ಹತೆ ಹಾಗೂ ಅನುಭವ ಹೊಂದಿದ್ದೀರೇ? ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಶಿಕ್ಷಣ ಅಥವಾ ತರಬೇತಿ ಹೊಂದಿದ್ದೀರೇ? ತಮ್ಮ ಆಸಕ್ತಿಕರ ಕೆಲಸವನ್ನು ಆನಂದಿಸುವ ನಮ್ಮ ಸ್ಥಳೀಯ ಸಂವಾದಕರ ತಂಡವನ್ನು ಸೇರಿಕೊಳ್ಳಿ!

Contact Us ನೈಪುಣ್ಯ

ಬ್ಲ್ಯೂಗ್ಲೋಬ್ ಇಂಟರ್ನ್ಯಾಷನಲ್ನಲ್ಲಿ ದ್ವಿತೀಯ ಅತ್ಯುತ್ತಮ ಎನ್ನುವ ಪದ ಸ್ವೀಕಾರಾರ್ಹವಲ್ಲ. ಉನ್ನತ ಮಟ್ಟ ನಮ್ಮ ಸಾಧಾರಣ ಗುಣಮಟ್ಟ. ನಮ್ಮ ವಿಸ್ತ್ರತ ನೈಪುಣ್ಯದ ಕಾರಣದಿಂದ ನಮ್ಮ ಗ್ರಾಹಕರು ಪುನಃ ಬರುವ ಗ್ರಾಹಕರಾಗಿರುತ್ತಾರೆ.

Contact Us ನಮ್ಮನ್ನು ಸಂಪರ್ಕಿಸಿ

ಜಗತ್ತಿನಾದ್ಯಂತ ಸಂಸ್ಥೆಗಳು ನಮ್ಮ ಮೇಲೆ ಭರವಸೆಯಿಟ್ಟಿವೆ -
... ಶೀಘ್ರದಲ್ಲೇ ನೀವೂ ಕೂಡ

ಟೆಲಿಫೋನ್ :
+1.541.330.0450
+55.21.2262.1793
+91.172.2561020
ಮೊಬೈಲ್ ಟೆಲಿಫೋನ್ :
+1.541.213.8526
+55.21.2262.1793
+91.981.4535577
ಫಕ್ಷ್ (ಉಸ-ಇಂಡಿಯಾ) :
+1.541.330.0451
+55.21.2262.1793
+91.172.2561020

www.blueglobetranslations.com

ಅನುವಾದ ಸೇವೆಗಳು -
... ನೂರಾರು ಭಾಷೆಗಳಲ್ಲಿ

ಅರೇಬಿಕ್ ಹೀಬ್ರ್ಯೂ
ಚೈನೀಸ್ ಇಟಾಲಿಯನ್
ಡಚ್ ಜಪಾನೀಸ್
ಇಂಗ್ಲಿಷ್ಲ್ಯಾಟಿನ್
ಫ್ರೆಂಚ್ ಪೋರ್ಚುಗೀಸ್
ಜರ್ಮನ್ ರಷಿಯನ್
ಗ್ರೀಕ್ ಸ್ಪ್ಯಾನಿಷ್
ಎಲ್ಲಾ ಭಾಷೆಗಳು

Professional Translation Services Company

Request a Quote

 

feed-image Feed Entries

Get your FREE QUOTE now or call us directly at 1.541.330.0450 or 541.213.8526 (USA)